ಪುರಾಣ ಮತ್ತು ಶಾಸನಗಳಿಗಿರುವ ಸಂಬಂಧ | Relation between Puranas and Inscriptions | Sri. Sadyojata Bhat | Kannada

ನಮ್ಮ ಇತಿಹಾಸವನ್ನು ತಿಳಿದುಕೊಳ್ಳಬಹುದಾದ ಶಾಸನಗಳಿಗೆ ಹೇಗೆ ಪುರಾಣಗಳ ಸಂಬಂಧವಿದೆ? ಪುರಾಣದಿಂದ ಇತಿಹಾಸ ಹೇಗೆ ಆರಂಭವಾಯಿತು? ತ್ರೇತಾಯುಗದ ರಾಮಾಯಣ ಹಾಗೂ ದ್ವಾಪರಯುಗದ ಮಹಾಭಾರತವು ಕೇವಲ ಯುದ್ಧಗಳ ಉಲ್ಲೇಖವಲ್ಲದೇ, ರಾಜಕೀಯ, ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ದೃಷ್ಟಿಕೋನಗಳನ್ನು ಕಥೆಯ ರೂಪದಲ್ಲಿ ನಮಗೆ ಪರಿಚಯಿಸುತ್ತವೆ. ಶ್ರೀಕೃಷ್ಣನನ್ನು ಸಮರ್ಥಕ ನಾಯಕನನ್ನಾಗಿ ಚಿತ್ರಿಸುವ ಮಹಾಭಾರತವು ಮುಂದಿನ ಹಲವಾರು ಯುಗಗಳಲ್ಲಿ ಅಳವಡಿಸಿಕೊಳ್ಳಬಹುದಾದ ಆಡಳಿತ ವೈಖರಿಯನ್ನು ಕಲಿಸುತ್ತದೆ.

ಆದರೆ ಭಾರತದ ವಿಷಯದಲ್ಲಿ, ಬ್ರಿಟಿಷ್‌ ಇತಿಹಾಸಕಾರರು ಪುರಾಣ ಮತ್ತು ಇತಿಹಾಸವನ್ನು ಬೇರ್ಪಡಿಸುತ್ತಾರೆ. ಜಗತ್ತಿನ ಯಾವುದೇ ದೇಶದಲ್ಲಿ ಬಟ್ಟೆ-ಬರೆ ತೊಡದಿರುವ ಕಾಲದಲ್ಲಿ, ಭಾರತದಲ್ಲಿ ಉತ್ತರೀಯವನ್ನು ಧರಿಸುವ ಕಾಲ ಬಂದಾಗಿತ್ತು. ನಮ್ಮ ಇತಿಹಾಸ ಆರಂಭವಾಗುವುದು ಆ ಸಮಯದಲ್ಲಿ. ಆದರೆ ಈಗ ಅದನ್ನು ತಪ್ಪಾಗಿ ಗಣನೆಗೆ ತೆಗೆದುಕೊಳ್ಳಲಾಗಿದೆ. ಶಾಸನಗಳು ಸಿಗದಿರುವ ಕಾರಣ, ಸುಮಾರು ಕ್ರಿ.ಪೂ. ೩೨೭ ನೇ ಇಸವಿಗೂ ಹಿಂದಿರುವ ಇತಿಹಾಸವನ್ನು ಪರಿಗಣಿಸಲಾಗುತ್ತಿಲ್ಲ. ವಾಸ್ತವವಾಗಿ ಇತಿಹಾಸ ಆರಂಭವಾಗುವುದು ಅದಕ್ಕೂ ಮುಂಚೆ. ದ್ವಾಪರಯುಗದ ಕೊನೆಯ ನಂತರ, ಕಲಿಯುಗದ ಆರಂಭ. ಅದಾದ ೩೦೦೦ ವರ್ಷಗಳ ನಂತರ ಕ್ರಿಸ್ತನ ಜನನ. ಈ ೩೨೦೦ ವರ್ಷಗಳ ಇತಿಹಾಸ ಕಳೆದುಹೋಗಿ, ಕ್ರಿಸ್ತನ ಜನನದ ೩೦೦-೪೦೦ ವರ್ಷಗಳ ಹಿಂದಿನ ಇತಿಹಾಸವನ್ನು ಮಾತ್ರ ಶಾಲೆ ಇತ್ಯಾದಿಗಳಲ್ಲಿ ಬೋಧಿಸುತ್ತಿರುವುದು ದುರದೃಷ್ಟಕರ.

How do our Puranas link to the inscriptions? How does history begin with Puranas? The epics Ramayana and Mahabharata just don’t talk about wars but also enlighten us with political, social, economic and cultural perspectives of those times. The competent leadership of Sri Krishna, as portrayed in Mahabharata teaches governance styles which could be adopted in the next several generations.

As far as Indian history is concerned, the British historians have separated the Puranas from the history. In times when no garment was worn by people anywhere in the world, it is said that Indians(men) used to wear scarves over their upper body. That was the time our actual history began. But it has been wrongly interpreted. Due to unavailability of inscriptions supporting the events that happened before 327 B.C., the history of that period hasn’t been considered. In fact, our history begins even before that. After the end of Dwapara Yuga, Kali Yuga begins and then around 3000 years later, Jesus Christ is born. It is unfortunate that these 3200 years of history has been lost and those taught in schools and elsewhere is that history which is only 300-400 years before the birth of Christ.


About Speaker: –

ಮೂಲತಃ ಕರ್ನಾಟಕದ ಉಡುಪಿಯವರಾದ ಸದ್ಯೋಜಾತ ಭಟ್ಟರು, ಧಾರವಾಡ ಮತ್ತು ಮೈಸೂರಿನಲ್ಲಿ ತಮ್ಮ ವಿದ್ಯಾಭ್ಯಾಸ ನಡೆಸಿದರು. ಐತಿಹಾಸಿಕ ವ್ಯವಸ್ಥೆ, ಬರವಣಿಗೆ ಹಾಗೂ ಕೈಬರಹದ ವಿಶ್ಲೇಷಣೆ ಸೇರಿದಂತೆ ಐತಿಹಾಸಿಕ ಹಸ್ತಪ್ರತಿಗಳ ಅರ್ಥೈಸುವಿಕೆಯ ಮೇಲೆ ಬೆಳಕು ಚೆಲ್ಲುವ ಪ್ಯಾಲಿಯೋಗ್ರಫಿ ಅವರ ಕ್ಷೇತ್ರ. ಸಂಸ್ಕೃತ, ಕನ್ನಡ ಮತ್ತಿತರ ಪುರಾತನ ಭಾಷೆಗಳಲ್ಲಿ ವಿಶೇಷ ಜ್ಞಾನ ಹೊಂದಿರುತ್ತಾರೆ. ವೇದ, ಪುರಾಣಗಳಿಂದ ಹಿಡಿದು ಇಂದಿನ ತಲೆಮಾರಿನ ವಿಷಯಗಳ ಕುರಿತು ಸಂಶೋಧನೆ ನಡೆಸಿ ಕೃತಿಗಳನ್ನು ರಚಿಸಿದ್ದಾರೆ. ಶಿಲೆಗಳಲ್ಲಡಗಿದ ಸತ್ಯ, ಕಾಲಯಾನ, ನಾಸತ್ಯಾ ಮತ್ತು ಮಿಹಿರಕುಲಿ ಇವು ಸದ್ಯೋಜಾತ ಭಟ್ಟರು ಬರೆದಿರುವ ಪುಸ್ತಕಗಳು.

Sadyojata Bhat is originally from Udupi district of Karnataka. He completed his education in Dharwad and Mysuru. His field of research is Paleography which focuses on ancient writing systems, analysis of historical handwriting, dating and analysis of historical manuscripts. He has widespread knowledge on Sanskrit, Kannada and other ancient languages. Starting from Vedas, Puranas, his research works also include current topics. The books written by Sadyojata Bhat are ‘Shilegalalladagida Satya’, ‘Kaalayaana’, ‘Naasatyaa’ and ‘Mihirakuli’.


Leave a Reply